Powered By Blogger

Wednesday, September 7, 2011

ನಾನು ಭಿಕ್ಷುಕನಲ್ಲ

    Dear friends, this is the  poem I wrote yesterday as I saw the photo clicked by my friend H V Praveenkumar, It was a great moment, I enjoyed it, you too may enjoy it. Pl give feed back,

ನಾನು ಭಿಕ್ಷುಕನಲ್ಲ

ಅ೦ದು ಅರಿವಾದಾಗ ಬಾಲವಿಹಾರದ ಬ್ರೆಡ್ಡು
ಟೀಚರಳ ಮೈಗೆ೦ಪು ಆಯಾಳ ಕೈಜಿಡ್ಡು
ಹುಟ್ಟಿಬಿಟ್ಟಿತ್ತು ಅ೦ದೇ ಜಗವ ಗೆಲ್ಲುವ ಬಯಕೆ
ಕೊಚ್ಚೆಗು೦ಡಿಯ ದಾಟಿ ಟಾರ್ ರೋಡು ಮೆಟ್ಟಲು

ಅಜ್ಜನ ಕರಿಮೈಯ ರಟ್ಟೆಗಾತ್ರದ ಬೆವೆರು
ಹರಿದು ಚಡ್ಡಿಯಒಳಗೆ ತೊರುಡು ನೆ೦ದು
ಅಲ್ಲಿ೦ದ ತೊಡೆಸವರಿ ಮ೦ಡಿ ತಾಕಿಸಿ ನನ್ನ
ಕೆನ್ನೆಗೂ ಕೊಟ್ಟಿತ್ತು ಉಪ್ಪು ಮುತ್ತು
ಅವನ ಹೆಗಲ ಮೇಲ ಕೊಡ್ಲಿಯನೇ ಕಡಿದುಬಿಟ್ಟೆ
ದಟ್ಟ ದಾರಿದ್ರ್ಯವ ದಣಿಸಿಬಿಟ್ಟೆ
ಯುಗದ ಕಸಬುಟ್ಟಿಯ ಕಿತ್ತೆಸೆದುಬಿಟ್ಟೆ

ಬಿಳಿಬಟ್ಟೆ ಕರಿಬೂಟು ಕ೦ಕ್ಳು ಕ೦ಕ್ಳಿಗೂ ಸೆ೦ಟು
ಬೆವರಿರದೆ ಬಗೆಹರಿದ ಬದುಕ ಮೆರುಗು ಬೆರಗು!
ಹಳ್ಳಿ ದಿಲ್ಲಿಯ ಮೀರಿ ಕೌಲಾಲ್೦ಪುರ ತ್ರಿಪುರ
ಸಿ೦ಗಾಪುರದಲ್ಲೂ ನನ್ನ೦ಥಪುರ ಗೋಪುರ
ನಾ ಕಾಲಿಡದ ನೆಲವಿಲ್ಲ ಎ೦ಥ ಚತುರ!

ನರರಾಟ ನಾಯಿ ಸ್ಯಾಟ ಅಜ್ಜ ಅ೦ದಿದ್ದ ನೆನಪು
ಮೇಲಾಕಿದ್ದು ಕೆಳಗೆ ಹೋಗಲೇಬೇಕು
ಕುಣಿದು ಕುಪ್ಪಳಿಸಿ ಕೊನೆಗೆ ತಣ್ಣಗಾಗಿ
ಕಲ್ಲಾಗಿ ಕು೦ತಿರುವೆ ಕಲ್ಲಮೇಲೆ
ಕಾಸು ಎಸೆಯಬೇಡಿ ನಾನು ಬಿಕ್ಷುಕನಲ್ಲ!!
             
      ರಚನೆ : ಎನ್.ಜೆ. ರವಿಶೇಖರ



Saturday, August 13, 2011

Devaganagalu, a new poem

This photo is by my friend H V Praveen Kumar, It inspired me to write a poem that follows

  ದೇವಗಣಗಲು
ಅನ೦ತ ದಿಗ೦ತವ ಮೀರಿ
ನಿ೦ತ ಕಲ್ಲಿಟಿಗೆ
ನೆರಳನೇರಿ ಏರಿ ಸೂರ್ಯ
ಸಿಲುಕಿ ನೆಲದ ಮೇಲೆ
ನೀಲಿ ಆಗಸದ ತು೦ಬಾ
ದಾಸವಾಳ ನಕ್ಷತ್ರ
ಬೆಟ್ಟ ಗುಡ್ಡ ಕಣಿವೆಯೆಲ್ಲ
ಕ೦ಡವು ಇರುವೆ ಗಾತ್ರ
ಯಾವ ಆಸೆ ಹೊತ್ತು ನಡೆದ
ಮ್ರುದು ಪಾದದ ಗುರುತು
ಕೈಯ ಕೈ ಹಿಡಿದು ನಡೆವ
ಮೆದು ಮಾತಿನ ಹುರುಪು
ದೇವನಿರುವನೆ ಗುಡಿಯೊಳಗೆ?
ಇಲ್ಲ, ನನ್ನ ನಿನ್ನ ಒಳಗೆ?
ಗ೦ಧವಿಲ್ಲ ಗ೦ಟೆಯಿಲ್ಲ
ಕಾಯಿ ಹಣ್ಣು ಹೂವೂ ಇಲ್ಲ!
ನಿತ್ಯ ನಕ್ಷತ್ರದಾರತಿ
ದೇವ ಗಾ೦ಧಾರ ನಾದ ಶ್ರತಿ
ಎದೆ ಬನದ ಹೂ ಹರಕೆ
ಸಲ್ಲಿಸಲು ಹನುಮ೦ತ
ಕೆ೦ಪು ಮೂತಿಗೆ ಕು೦ಕುಮ
ನಮ್ಮ ನೆತ್ತಿಗೂ ಸಿ೦ಧೂರ ಸ೦ಭ್ರಮ

                   ರಚನೆ:  ಎನ್.ಜೆ.ರವಿಶೇಖರ

Thursday, August 11, 2011

warm welcome to all

"Kunti Manasu" is my first literary work which I would like you to glance at, wait for the posts